Home
ಗುಂಡ್ಲುಪೇಟೆ ಪುರಸಭೆಯು 1968ರಲ್ಲಿ ಸ್ಥಾಪನೆಯಾಯಿತು. ಗುಂಡ್ಲುಪೇಟೆ ಪಟ್ಟಣವು ಚಾಮರಾಜನಗರ ಜಿಲ್ಲೆಗೆ ಸೇರಿದ್ದು, ಜಿಲ್ಲೆಯಿಂದ ಸುಮಾರು 35 ಕೀಲೋಮೀಟರ್ ದೂರದಲ್ಲಿರುತ್ತದೆ. 2011ರ ಜನಗಣತಿಯ ಪ್ರಕಾರ ಗುಂಡ್ಲುಪೇಟೆ ಪಟ್ಟಣವು 28,157 ಜನಸಂಖ್ಯೆಯನ್ನು ಹೊಂದಿರುತ್ತದೆ. ಗುಂಡ್ಲುಪೇಟೆ ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡ್ ಗಳಿದ್ದು 23 ಚುನಾಯಿತ ಸದಸ್ಯರು ಹಾಗೂ 5 ನಾಮನಿರ್ದೇಶಿತ ಸದಸ್ಯರಿರುತ್ತಾರೆ. ಗುಂಡ್ಲುಪೇಟೆ ಪುರಸಭೆಯ ವ್ಯಾಪ್ತಿಯು ಒಟ್ಟು 4.23 ಚದುರ ಕೀಲೋಮೀಟರ್ ಗಳಿರುತ್ತದೆ. ಗುಂಡ್ಲುಪೇಟೆ ಪಟ್ಟಣದಲ್ಲಿ ಆಕರ್ಷಕ ಪೌರಾಣಿಕ ಕೇಂದ್ರವೆಂದರೆ ಶ್ರೀ. ವಿಜಯನಾರಾಯಣಸ್ವಾಮಿ ದೇವಾಲಯ. ಗುಂಡ್ಲುಪೇಟೆಯು ಪ್ರವಾಸಿತಾಣಕ್ಕೆ ಹೆಸರುವಾಸಿಯಾಗಿದ್ದು, ಸುಪ್ರಸಿದ್ದ ರಾಷ್ಟ್ರೀಯ ಉದ್ಯಾನ ವನ ಬಂಡಿಪುರ ಪಟ್ಟಣದಿಂದ ಕೇವಲ 17 ಕೀಲೋಮೀಟರ್ ದೂರದಲ್ಲಿರುತ್ತದೆ. ಪ್ರೇಕ್ಷಣಿಯ ಸ್ಥಳ ಊಟಿ ಜಿಲ್ಲೆಯು ಪಟ್ಟಣದಿಂದ ಸುಮಾರು 90 ಕೀಲೋಮೀಟರ್ ದೂರದಲ್ಲಿರುತ್ತದೆ. ಅಲ್ಲದೆ ಪ್ರಸಿದ್ದ ಶ್ರೀ. ಹಿಮವತ್ ಗೋಪಾಲಸ್ವಾಮಿ ದೇವಸ್ಥಾನ, ಪಾರ್ವತಿ ಬೆಟ್ಟ, ಹುಲಿಗನಮುರಡಿ ದೇವಾಲಯಗಳುಳ್ಳ ಗುಂಡ್ಲುಪೇಟೆ ಪಟ್ಟಣವು ರಾಜ್ಯ, ಹೋರರಾಜ್ಯ ಮತ್ತು ವಿದೇಶಿ ಪ್ರವಾಸಿಗರನ್ನು ಆರ್ಕಷಿಸುತ್ತಿದೆ. The Town Municipal Council (TMC) Gundlupet was constituted in 1968. Gundlupet is a town and a taluk headquarters situated in Chamarajanagar district at a distance of 35km. The census report of the year 2011 shows that Gundlupet had a population of 28157 inhabitants. The ULB consists of 23 wards with respective number of councilors and 5 number of nominee councilors. Gundlupet TMC stretches to an area of 4.23sqkms. Gundlupet town was famous for tourism places. It has National Park Bandipura. The famous historical temple vijaya narayana swamy temple is situated within the town limits. Town has pilgrim places like Parvathi hill, Himavath Gopal Swamy hill, HuliganaMuradiVenkataramanaSwamy hill etc., Gundlupet town is the gateway to the bordering states of Tamilnadu and Kerala. Ooty district is 90kms away from the town. ನಮ್ಮ ಧ್ಯೇಯೊದ್ದೇಗಳು:- ಗುಂಡ್ಲುಪೇಟೆ ಪುರಸಭೆ ವ್ಯಾಪ್ತಿಯೊಳಗಿನ ಎಲ್ಲಾ ಕುಟುಂಬಗಳಿಗೆ ಸಮರ್ಪಕವಾಗಿ ಕುಡಿಯುವ ನೀರಿನ ಸರಬರಾಜು, ಸರಕಾರದ ಎಲ್ಲಾ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸುವುದು, ಪುರಸಭಾ ವ್ಯಾಪ್ತಿಯೊಳಗಿನ ಎಲ್ಲಾ ದಾರಿಗಳಿಗೆ ಬೀದಿ ದೀಪ ಅಳವಡಿಕೆ, ಉತ್ತಮ ರೀತಿಯ ಕಸ ಸಂಗ್ರಹಣೆ ಮತ್ತು ವಿಲೇವಾರಿ ಮಾಡಿ ಪಟ್ಟಣವನ್ನು ಸುಂದರವಾಗಿಡುವುದು, ಪಟ್ಟಣದ ಶುಚ್ಛತೆ ಕಾಪಾಡುವುದು. ಉತ್ತಮ ರೀತಿಯ ರಸ್ತೆ ,ಚರಂಡಿಯ ವ್ಯವಸ್ಥೆಯನ್ನು ಒದಗಿಸಿ ಸಾರಿಗೆ ಸಂಚಾರ ಸುಗಮಗೊಳಿಸುವುದು. ಹಾಗೂ ಕೆ.ಎಂ.ಆರ್.ಪಿ ಯೋಜನೆಯಡಿ ಸುಧಾರಣೆಗೊಳ್ಳುತ್ತಿರುವ ಗಣಕೀಕರಣ ಯೋಜನೆಗಳಾದ ಪುರಸಭಾ ವೆಬ್ ಸೈಟ್, ಸಾರ್ವಜನಿಕ ಕುಂದು ಕೊರತೆ ನಿವಾರಣಾ ಘಟಕ, ಜನನ - ಮರಣ ನೋಂದಣಿ, ಗಣಕೀಕೃತಗೊಳ್ಳಿತ್ತಿರುವ ಆಸ್ತಿ ತೆರಿಗೆ ಯೋಜನೆಯ ಮೂಲಕ ಜನರಿಗೆ ಉತ್ತಮ ಸೇವೆ ಹಾಗೂ ಪಾರದರ್ಶಕ ಆಡಳಿತವನ್ನು ನೀಡುವುದು. ವೆಬ್ ಸೈಟ್ : ಗುಂಡ್ಲುಪೇಟೆ ಪುರಸಭೆಯ ವೆಬ್ ಸೈಟ್ www.gundlupettown.gov.in ಆಗಿದ್ದು ಸಾರ್ವಜನಿಕರು ಪುರಸಭೆಯ ಮಾಹಿತಿಯನ್ನು ವೆಬ್ ಸೈಟ್ ನಲ್ಲಿ ಪಡೆದುಕೊಳ್ಳಬಹುದಾಗಿದೆ. ಜನನ-ಮರಣ : ಗುಂಡ್ಲುಪೇಟೆ ಪುರಸಭೆಯಲ್ಲಿ 1990 ರಿಂದ ಈ ದಿನಾಂಕದವೆರೆಗೆ ಜನನ ಮತ್ತು ಮರಣ ದಾಖಲಾತಿಗಳನ್ನು ಗಣಕೀಕರಣ ಗೊಳಿಸಲಾಗಿದ್ದು, ಪುರಸಭೆಯ ವೆಬ್ ಸೈಟ್ ಮೂಲಕ ಸಾರ್ವಜನಿಕರು ಜನನ ಮತ್ತು ಮರಣ ದಾಖಲಾತಿಗಳನ್ನು ವೀಕ್ಷಿಸಬಹುದು. ಸಹಾಯವಾಣಿ : ಗುಂಡ್ಲುಪೇಟೆ ಪುರಸಭೆಯಲ್ಲಿ ಸಾರ್ವಜನಿಕ ಕುಂದು ಕೊರತೆಗಳ ನಿವಾರಣಾ ಘಟಕವನ್ನು ದಿನಾಂಕ: 15-09-2009 ರಿಂದ ಪ್ರಾರಂಭಿಸಲಾಗಿದೆ. ಸಾರ್ವಜನಿಕರು ತಮ್ಮ ಕುಂದು ಕೊರತೆಗಳನ್ನು ಪತ್ರ, ದೂರವಾಣಿ, ಹಾಗೂ ವೆಬ್ ಸೈಟ್ ಮುಖಾಂತರ ದೂರುಗಳನ್ನು ದಾಖಲಿಸಬಹುದು. ಸಹಾಯವಾಣಿ ಸಂಖ್ಯೆ-08229-223377 ಹಾಗೂ http://www.gundlupettown.gov.in/pgr/grievance-redressal.jsp ಮುಖಾಂತರ ನೇರವಾಗಿ ವೆಬ್ ಸೈಟ್ ಮೂಲಕ ದೂರಗಳನ್ನು ನೋಂದಾಯಿಸಬಹುದು. ಆಸ್ತಿ ತೆರಿಗೆ : ಗುಂಡ್ಲುಪೇಟೆ ಪುರಸಭೆಯಲ್ಲಿ ಆಸ್ತಿ ತೆರಿಗೆ ಗಣಕೀಕರಣಕ್ಕೆ ಸಂಬಂದಿಸಿದಂತೆ ಎಲ್ಲಾ ವಾರ್ಡ್ ಗಳ ಸರ್ವೆ ಕಾರ್ಯ ಮುಗಿದಿದ್ದು, ಆಸ್ತಿಗಳ ವಿವರವನ್ನು ಡಾಟಾ ಎಂಟ್ರಿ ಮಾಡಿಸಲಾಗಿದ್ದು ಪೌರ ಸುದಾರಣಾ ಕೋಶ ಬೆಂಗಳೂರಿಗೆ ಡಾಟಾಬೇಸ್ ಸಲ್ಲಿಸಲಾಗಿದ್ದು, ಶೀಘ್ರದಲ್ಲಿಯೇ ಗಣಕೀಕರಣ ಗೊಳಿಸಲಾಗುವುದು. Click here for Gundlupet Town Water Supply Nodal officer details
Municipal Reforms Cell, Directorate of Municipal Administration has won the Bronze Award for the project Aasthi (GIS based property tax information System) in National Awards for e-Governance 2011
ಗಣಕೀಕರಣ ಯೋಜನೆಗಳ ಬಗ್ಗೆ ಮಾಹಿತಿ:-

